ಅಸ್ಫಟಿಕತೆ
ಘನಪದಾರ್ಥಕ್ಕೆ ನಿರ್ದಿಷ್ಟ ಜ್ಯಾಮಿತೀಯ ಪ್ರರೂಪಗಳನ್ನು ಪ್ರದರ್ಶಿಸುವ ಸ್ಫಟಿಕಾಕೃತಿ ಇಲ್ಲದಿರುವಿಕೆ. ಅದರ ಅಣು ಪರಮಾಣುಗಳು ಒಂದು ಕ್ರಮದಲ್ಲಿ ಅಳವಡಿಸಿಕೊಂಡಿಲ್ಲದಿರುವಿಕೆ. ಮೇಲುನೋಟಕ್ಕೆ ಅಸ್ಫಟಿಕವಾಗಿ ಕಾಣುವ ಪದಾರ್ಥಗಳನ್ನು ಸೂಕ್ಷ್ಮದರ್ಶಕದಲ್ಲಿ =ನೋಡಿದರೆ ಸಾಮಾನ್ಯವಾಗಿ ಅವು ಅತ್ಯಂತ ಸೂಕ್ಷ್ಮ ಹರಳುಗಳಿಂದ ಕೂಡಿರುತ್ತವೆ. ಅಂದರೆ ಅವು ದ್ರವಗಳೇ ; ದ್ರವಗಳಂತೆ ಸ್ರವಿಸಬಲ್ಲವು _ ಆದರೆ ಬಹಳ ನಿಧಾನವಾಗಿ. ಆದುದರಿಂದ ಅಸ್ಫಟಿಕತೆ ಎಂಬುದೇ ಇಲ್ಲವೆಂಬುದು ವಿಜ್ಞಾನಿಗಳ ಸಾಮಾನ್ಯ ನಂಬಿಕೆ. ಆದರೆ ಈಚೆಗೆ ರೈಲಿಯವರು ನಿಜವಾದ ಅಸ್ಫಟಿಕಕಾರ್ಬನ್ ತಯಾರಿಸಿದ್ದಾರೆಂದು ವರದಿ.
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ